Skip to content
  • https://www.facebook.com/
  • https://twitter.com/
  • https://t.me/
  • https://www.instagram.com/
  • https://youtube.com/
Logo
Logo
  • Home
  • ePaper
  • ರಾಜ್ಯ
  • ಕರಾವಳಿ ಸಂಸ್ಕೃತಿ
  • ದೇಶ-ವಿದೇಶ
  • ಕ್ರೀಡೆ
  • ರಾಜಕೀಯ
  • ಉತ್ತರ ಕನ್ನಡ
    • ಭಟ್ಕಳ
    • ಯಲ್ಲಾಪುರ
    • ಶಿರಸಿ
    • ಅಂಕೋಲಾ
    • ಮುಂಡಗೋಡು
    • ದಾಂಡೇಲಿ
    • ಜೋಯಿಡಾ
    • ಹಳಿಯಾಳ
    • ಸಿದ್ದಾಪುರ
    • ಹೊನ್ನಾವರ
    • ಕುಮಟಾ
    • ಕಾರವಾರ
  • Home
  • ePaper
  • ರಾಜ್ಯ
  • ಕರಾವಳಿ ಸಂಸ್ಕೃತಿ
  • ದೇಶ-ವಿದೇಶ
  • ಕ್ರೀಡೆ
  • ರಾಜಕೀಯ
  • ಉತ್ತರ ಕನ್ನಡ
    • ಭಟ್ಕಳ
    • ಯಲ್ಲಾಪುರ
    • ಶಿರಸಿ
    • ಅಂಕೋಲಾ
    • ಮುಂಡಗೋಡು
    • ದಾಂಡೇಲಿ
    • ಜೋಯಿಡಾ
    • ಹಳಿಯಾಳ
    • ಸಿದ್ದಾಪುರ
    • ಹೊನ್ನಾವರ
    • ಕುಮಟಾ
    • ಕಾರವಾರ
Subscribe
Close

Search

Logo
Logo
  • Home
  • ePaper
  • ರಾಜ್ಯ
  • ಕರಾವಳಿ ಸಂಸ್ಕೃತಿ
  • ದೇಶ-ವಿದೇಶ
  • ಕ್ರೀಡೆ
  • ರಾಜಕೀಯ
  • ಉತ್ತರ ಕನ್ನಡ
    • ಭಟ್ಕಳ
    • ಯಲ್ಲಾಪುರ
    • ಶಿರಸಿ
    • ಅಂಕೋಲಾ
    • ಮುಂಡಗೋಡು
    • ದಾಂಡೇಲಿ
    • ಜೋಯಿಡಾ
    • ಹಳಿಯಾಳ
    • ಸಿದ್ದಾಪುರ
    • ಹೊನ್ನಾವರ
    • ಕುಮಟಾ
    • ಕಾರವಾರ
  • Home
  • ePaper
  • ರಾಜ್ಯ
  • ಕರಾವಳಿ ಸಂಸ್ಕೃತಿ
  • ದೇಶ-ವಿದೇಶ
  • ಕ್ರೀಡೆ
  • ರಾಜಕೀಯ
  • ಉತ್ತರ ಕನ್ನಡ
    • ಭಟ್ಕಳ
    • ಯಲ್ಲಾಪುರ
    • ಶಿರಸಿ
    • ಅಂಕೋಲಾ
    • ಮುಂಡಗೋಡು
    • ದಾಂಡೇಲಿ
    • ಜೋಯಿಡಾ
    • ಹಳಿಯಾಳ
    • ಸಿದ್ದಾಪುರ
    • ಹೊನ್ನಾವರ
    • ಕುಮಟಾ
    • ಕಾರವಾರ
  • https://www.facebook.com/
  • https://twitter.com/
  • https://t.me/
  • https://www.instagram.com/
  • https://youtube.com/
ಅಂಕೋಲಾಉತ್ತರ ಕನ್ನಡ

ವಾಣಿಜ್ಯ ಬಂದರು, ಏರ್‌ಪೋರ್ಟ್ ಹೆಸರು ದುರ್ಬಳಕೆ! ಬೇರೂರಿದೆ ಅಂಕೋಲೆಯಲ್ಲಿ ರಿಯಲ್ ಎಸ್ಟೇಟ್ ದಂದೆ!

By Akshaykumar s
July 4, 2026 2 Min Read
0

ಅಂಕೋಲಾ: ತಾಲೂಕಿನಲ್ಲಿ  ಜಿ.ಎಸ್.ಡಬ್ಲ್ಯೂ ವಾಣಿಜ್ಯ ಬಂದರು, ಅಲಗೇರಿ ವಿಮಾನ ನಿಲ್ದಾಣ ಹಾಗೂ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದಂತಹ ಬೃಹತ್ ಯೋಜನೆಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು, ಮುಗ್ಧ ಜನರಿಗೆ ರಿಯಲ್ ಎಸ್ಟೇಟ್ ಹೆಸರಿನಲ್ಲಿ ಯಾರದ್ದೋ ಜಾಗವನ್ನು ಮತ್ಯಾರಿಗೋ ಮಾರಾಟ ಮಾಡುವ ಮೂಲಕ ಇಲ್ಲಿನ ರಿಯಲ್ ಎಸ್ಟೇಟ್ ದಂದೆಕೋರರು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ.

ಹೌದು..ಸ್ವಾತಂತ್ರ್ಯ ಹೋರಾಟದ ನೆಲ,ಕರ್ನಾಟಕದ ಬಾರ್ಡೋಲಿ ಎಂದೇನಿಸಿಕೊಂಡಿರುವ ಅಂಕೋಲಾ ತಾಲೂಕು ಕೆಲವರ್ಷಗಳಿಂದ ಹಲವಾರು ಯೋಜನೆಗಳ ಮೂಲಕ ರಾಜ್ಯಾದಲ್ಲೇ ಹೆಸರಾಗಿದೆ. ಅದರಲ್ಲಿ ಅಲಗೇರಿ ವಿಮಾನ ನಿಲ್ದಾಣಕ್ಕೆ ಈಗಾಗಲೇ ಭೂಮಿಯನ್ನು ಗುರುತಿಸಿ ಸ್ವಾದಿನಪಡಿಸಿಕೊಳ್ಳಲು ಸರಕಾರ ಮುಂದಾಗಿದೆ ಅದರಂತೆಯೇ ಕೇಣಿಯಲ್ಲಿ ಪ್ರಾರಂಭಿಸಲಾಗುತ್ತದೆ ಎನ್ನಲಾಗಿದ್ದ ಉದ್ದೇಶಿತ ವಾಣಿಜ್ಯ ಬಂದರು ಹಾಗೂ ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ ಯೋಜನೆಗಳನ್ನು ಮುಂದಿಟ್ಟುಕೊಂಡು ರಿಯಲ್ ಎಸ್ಟೇಟ್ ದಂದೆಕೊರರು ಸ್ಥಳೀಯ ಜಮೀನು ಮಾಲೀಕರಿಗೆ ಪಂಗನಾಮ ಹಾಕುತ್ತಿದ್ದಾರೆ ಎನ್ನಲಾಗಿದೆ.

ದಂದೆಕೋರರು ಮೊದಲು ಸ್ಥಳೀಯ ಜಮೀನು ಮಾಲೀಕರನ್ನು ಸಂಪರ್ಕಿಸಿ, ದೊಡ್ಡ ಮೊತ್ತದ ಆಮಿಷ ಒಡ್ಡಿ ಅಲ್ಪಸ್ವಲ್ಪ ಮುಂಗಡ ಹಣ  ನೀಡುತ್ತಿದ್ದಾರೆ. ಒಪ್ಪಂದ ಮಾಡಿಕೊಂಡ ಬಳಿಕ ಜಮೀನಿನ ವಾರಸ್ದಾರರಿಗೆ ಪೂರ್ಣ ಹಣ ನೀಡದೇ ಸತಾಯಿಸುವುದು, ಬೆದರಿಕೆ ಹಾಕುವುದು ಹಾಗೂ ಕಾನೂನು ಸಂಕಷ್ಟಗಳಿಗೆ ಸಿಲುಕಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ತಲೆಮಾರುಗಳಿಂದ ಕೃಷಿ ಮಾಡಿಕೊಂಡಿದ್ದ ಮೂಲ ರೈತರು ಮತ್ತು ವಾರಸ್ದಾರರು ಇಂದು ಬೀದಿಗೆ ಬೀಳುವಂತಾಗಿದೆ.

ನಕಲಿ ದಾಖಲೆ ಸೃಷ್ಟಿಸಿ ಭೂ ಮಾಫಿಯಾ ಆಟ!

​ಅಭಿವೃದ್ಧಿ ಯೋಜನೆಗಳ ಹಿನ್ನೆಲೆಯಲ್ಲಿ ಅಂಕೋಲಾ ಸುತ್ತಮುತ್ತಲಿನ ಭೂಮಿಗೆ ಭಾರೀ ಬೇಡಿಕೆ ಬಂದಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಭೂ ಮಾಫಿಯಾ,ನಕಲಿ ಭೂ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಮೂಲ ಮಾಲೀಕರಿಗೆ ತಿಳಿಯದಂತೆ ಜಮೀನಿನ ನಕಲಿ ಪತ್ರಗಳನ್ನು ತಯಾರಿಸಿ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಪ್ರಮುಖ ಹೂಡಿಕೆದಾರರಿಗೆ ಕೋಟಿ ಕೋಟಿ ರೂಪಾಯಿಗೆ ಮಾರಾಟ ಮಾಡಿ ವಂಚಿಸುತ್ತಿರುವ ಜಾಲ ಸಕ್ರಿಯವಾಗಿದ್ದು,ಜನಸಾಮಾನ್ಯರು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಹಾಗೆಯೇ ನಕಲಿ ದಾಖಲೆ ಸೃಷ್ಟಿಸುವವರ ವಿರುದ್ಧ ಕಾರ್ಯಾಚರಣೆ ನಡೆಸಿ ಈ ದಂದೆಯ ಜಾಲವನ್ನು ಬುಡದ ಸಮೇತ ಕಿತ್ತೆಸೆಯಬೇಕು ಎನ್ನುವುದು ಸಾರ್ವಜನಿಕರ ಅಗ್ರಹವಾಗಿದೆ.

ಅಂಕೋಲಾ ಭಾಗದಲ್ಲಿ ಜಮೀನು ಖರೀದಿ ಮಾಡುವ ಮುನ್ನ ಸಾರ್ವಜನಿಕರು ಹಾಗೂ ಹೂಡಿಕೆದಾರರು ದಾಖಲೆಗಳನ್ನು ಕಂದಾಯ ಇಲಾಖೆಯಲ್ಲಿ ಕೂಲಂಕಷವಾಗಿ ಪರಿಶೀಲಿಸಬೇಕು. ಯಾವುದೇ ಬ್ರೋಕರ್‌ಗಳ ಆಮಿಷಕ್ಕೆ ಒಳಗಾಗಬಾರದು.​ಸರಕಾರದ ಯೋಜನೆಗಳ ಹೆಸರಿನಲ್ಲಿ ನಡೆಯುತ್ತಿರುವ ಈ ಮಹಾ ಲೂಟಿಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತಕ್ಷಣವೇ ತನಿಖೆ ನಡೆಸಬೇಕು, ವಂಚಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜೆ ಎಸ್ ಡಬ್ಲ್ಯೂ ಕಂಪನಿಗೂ ಬಿಡದ ಲೋಕಲ್ ರಿಯಲ್ ಎಸ್ಟೇಟ್ ದಂಡೆಕೋರರು!

ಭಾರತದ ದೊಡ್ಡ ಕಂಪೆನಿಗಳಲ್ಲೊಂದಾದ ಜೆ.ಎಸ್.ಡಬ್ಲ್ಯೂ ಕಂಪನಿಗೆ ಸ್ಥಳೀಯ ರಿಯಲ್ ಎಸ್ಟೇಟ್ ಬ್ರೋಕರ್ ಅಜೀತ್ ನಾಯಕ ವಾಣಿಜ್ಯ ಬಂದರು ನಿರ್ಮಾಣಕ್ಕಾಗಿ ಜಮೀನು ಕೋಡಿಸುತ್ತೇನೆಂದು ಸರಿ ಸುಮಾರು 14 ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದಾನೆ. ವಾಣಿಜ್ಯ ಬಂದರು ಕಾಮಗಾರಿ ಪ್ರಾರಂಭವಾಗುತ್ತಿದ್ದಂತೆ ಉದ್ಯೋಗ ಕೋಡಿಸುತ್ತೇನೆ ಎಂದು ಹೇಳಿ ಸರಿಸುಮಾರು ಐವತ್ತುಕ್ಕೂ ಹೆಚ್ಚಿನ ಯುವಕರ ಖಾತೆಗೆ ವಂಚನೆಯ ಹಣವನ್ನು ಹಾಕಿಸಿ,ಅವರಿಂದ ನಗದು ಮೂಲಕ ಹಣ ಪಡೆದಿದ್ದ ಎನ್ನಲಾಗಿದೆ. ಕಂಪನಿ ವಂಚನೆ ಪ್ರಕರಣ ದಾಖಲಿಸುತ್ತಲೇ ತಲೆಮರೆಸಿಕೊಂಡಿರುವ ಆತನ ಬಗ್ಗೆ ಪೊಲೀಸಾರಿಗೆ ಸುಳಿವೇ ಸಿಗದೆ ನಿರಂತರ ಶ್ರಮವಹಿಸುತ್ತಿದ್ದಾರೆ. ಇತ್ತ ಕೆಲಸ ಸಿಗುತ್ತದೆ ಎಂದು ಹಣ ಹಾಕಿಸಿಕೊಂಡಿದ್ದ ಕೆಲ ಯುವಕರು ಜೈಲು ಪಾಲಾಗಿದ್ದರೆ ಇನ್ನು ಕೆಲ ಯುವಕರು ಇಂದು ಕಾನೂನು ಸಮಸ್ಯೆ ಎದುರಿಸುತ್ತಿದ್ದಾರೆ.

ಕಳೆದ ಕೆಲ ಆರೇಳು ವರ್ಷಗಳ ಹಿಂದೆ ಮಗಳ ಮದುವೆಯ ಹಣದ ಸಮಸ್ಯೆಯಲ್ಲಿದ್ದ ನನಗೆ ಪ್ರಭಾವಿ ವ್ಯಕ್ತಿಯೋರ್ವ ನಮ್ಮ ಜಮೀನನ್ನು ಖರೀದಿಸುತ್ತೇನೆಂದು ಹೇಳಿ,ಇನ್ನು ಕೆಲವೇ ದಿನಗಳಲ್ಲಿ ಜಮೀನಿನ ಕ್ರಯದ ಎಲ್ಲಾ ಹಣವನ್ನು ನೀಡುತ್ತೇನೆ ಎಂದು ಬಾಂಡ್ ಬರೆಯಿಸಿಕೊಂಡು ಎರಡು ಲಕ್ಷ ಮುಂಗಡ ಹಣವನ್ನು ನೀಡಿದ್ದ, ನಂತರದಲ್ಲಿ ಪೂರ್ತಿ ಹಣವನ್ನು ನೀಡದೆ ಅಂದಿನಿಂದ ಇಲ್ಲಿಯವರೆಗೆ ಸಾಲ ಕೂಪಕ್ಕೆ ದೂಡಿದ್ದಾನೆ.

ಎಸ್ ಟಿ.ಎನ್
ರಿಯಲ್ ಎಸ್ಟೇಟ್ ಮಾಫಿಯಾದಲ್ಲಿ ನೊಂದವರು

Author

Akshaykumar s

Follow Me
Other Articles
Previous

ಉತ್ತರ ಕನ್ನಡದಲ್ಲಿ ಕರಾಳ ದಂದೆ: ಕಾಡುಪ್ರಾಣಿಗಳ ಬೇಟೆಗೆ ‘ನಾಡ ಬಾಂಬ್’ ತಯಾರಿಕಾ ಜಾಲ ಪತ್ತೆ!

Next

ಹೊನ್ನಾವರದ ಕಡಲತೀರದಲ್ಲಿ ಆಲಿವ್ ರಿಡ್ಲಿ ಆಮೆ ಸಂರಕ್ಷಣೆಗೆ ವಿಶೇಷ ಕಾರ್ಯಕ್ರಮ!

No Comment! Be the first one.

Leave a Reply Cancel reply

Your email address will not be published. Required fields are marked *

Copyright 2026 — . All rights reserved. Blogsy WordPress Theme